Saturday, November 24, 2007

Saturday, October 6, 2007

Wednesday, September 19, 2007

Thursday, September 6, 2007

ಒಡೆದ ಕನಸು


ಉಂಗುರ


ಮುತ್ತಾದ ಮಳೆ ಹನಿ


Just for u...


ಜೋಗದ ಗುಂಡಿ


ಆ ಪುಟ್ಟ ಹೂವೂ


ಪ್ರಶ್ನೆಯಲ್ಲಿ ಅಡಗಿದ್ದ ಉತ್ತರ


ನನ್ನ ಮನಸನ್ನು ಕರಗಿಸಿ ನೀನೇಕೆ ಕಲ್ಲಾದೆ?
ನನ್ನನ್ನು ಪ್ರೀತಿಯ ಕಡಲಿಗೆ ಎಳೆದು ನೀನೇಕೆ ದಡ ಸೇರಿದೆ?
ಎಂದೆಂದು ನನ್ನ ನೇನಪಿಡು ಎಂದು ಹೇಳಿ ನೀ ಏಕೆ ಮರೇತುಹೋದೆ?
ನನ್ನ ಜಗವನ್ನು ಬದಲಿಸಿ ನೀನೇಕೆ ಬದಲಾದೇ?

ಬೇಡ ಗೆಳೆಯ!! ಬಿಟ್ಟು ಹೋಗಬೇಡ….
ಇರಲಾರೆ ನಿನ್ನ ಬಿಟ್ಟು,
ನಿನ್ನ ನೆನಪೇ ಎಲ್ಲಾ ಹೊತ್ತು,
ಉಳಿಸು ನನ್ನನು ಪ್ರೀತಿ ಕೊಟ್ಟು.

ಪ್ರೀತಿಸುವೆ ನಿನ್ನನು ಎಂದೆಂದು

ಹತ್ತಾರು ಕಾರಣ ಕೊಡುವೆ ನೀನು
ನನ್ನನ್ನು ದೂರ ತಳ್ಳಲು
ಒಂದೇಯೊಂದು ಭಾವನೆ ಸಾಕು ನಂಗೆ
ನೀನು ಬೇಕೆನ್ನಲು

ನೂರು ಪ್ರಶ್ನೆ ಕೇಳುವೆ ನೀನು
ಏಕೆ ಜೊತೆ ಇರಬೇಕೆಂದು
ನೀನೆಲ್ಲ ಪ್ರಶ್ನೆಗಳಿಗೆ
ಒಂದೇಯೊಂದು ಉತ್ತರ ನಂದು

ಸಾವಿರಾರು ನೂವು ಕೊಟ್ಟೆ
ಹಣೆಬರಹ ಎಂದು ಹೆಸರು ಇಟ್ಟೆ
ಆದರೂ ನಾ ನಿನ್ನಲ್ಲೇ ಮನಸನಿಟ್ಟೆ

ನಿನ್ನೆಲ್ಲ ಮಾತಿಗೂ..
ನಿನ್ನೆಲ್ಲ ಪ್ರಶ್ನೆಗೂ..
ನನ್ನ ಉತ್ತರ ಒಂದೇಯೊಂದು........

"ಪ್ರೀತಿಸುವೆ ನಿನ್ನನು ಎಂದೆಂದು"

ಅರ್ಚನ

ಅವಳು ಬಹಳ ಸ್ವಾಭಿಮಾನಿ
ನಾ ಅವಳ ಅಭಿಮಾನಿ

ಹೂವಿಗಿಂತ ಮೃದು ಸ್ವಭಾವ
ಮನಸೊಳಗಿದೆ ನೂರು ಭಾವ

ನೂಡಲು ಅವಳು ಎಷ್ಟು ಸರಳ
ಅಂತವರು ಬಹಳ ವಿರಳ

ಇದ್ದರವಳು ನನ್ನ ಸುತ್ತು
ಜಾರುವುದು ಗೊತ್ತಾಗದಂತೆ ಹೊತ್ತು

ಮರೆಯನು ಎಂದಿಗೂ ನಾ ಅವಳನ್ನ
ಅವಳ ಆ ನಗುವನ್ನ
ಆ ನೀಳ ಜಡೆಯನ್ನ
ಅವಳೇ ಅರ್ಚನ !
ಎರೆದಳು ಸ್ನೇಹದ ಸಿಂಚನ
ಬೀರಿದಳು ಪ್ರೇಮದ ಕಂಪನ
ಅವಳಿಂದ ಸುಂದರವಾಯಿತು ಜೀವನ
ದೇವರಲ್ಲಿ ಬೇಡುವೆನು ಪ್ರತಿ ದಿನ
ಎಂದಿಗೂ ಹೀಗೆ ಇರಲಿ ನಮ್ಮ ಗೆಳೆತನ!!
ಮನಸನ್ನು ಆಳುತಿರುವೆ!
ಕನಸಲ್ಲಿ ಕಾಡುತಿರುವೆ !
ಉಸಿರಲ್ಲಿ ಬೆರೆತಿರುವೆ !
ನನ್ನಲ್ಲಿ ಜೀವವಾಗಿರುವೆ !
ನಿನ್ನಿಂದ ನಾ ಜೀವಂತವಾಗಿರುವೆ!
ತೊರೆದು ಹೋದೆ ಬಲು ಸುಲಬದಿಂದ
ಕಿತ್ತು ಬಿಸಾಡಿದೇ ಪ್ರೀತಿ ಮನಸಿನಿಂದ
ಏನು ಮಾಡಲಿ,
ನಿನ್ನಂತೆ ಇರಲು ಆಗುತ್ತಿಲ್ಲ ನನ್ನಿಂದ!
ಮನದ ತೋಟ ಬರಿದಾಗಿತ್ತು
ಗಾಳಿ ಬೀಸಿದಾಗ ಮಾತ್ರ ನಲಿಯುತ್ತಿತ್ತು

ಬಂದೆ ನೀ ವರುಣ
ಹಸಿರಾಯಿತು ನನ್ನ ಮನ
ಪ್ರತಿದಿನ ಹೊಸ ಹೊಸ ಕನಸಿನ ಬಣ್ಣ

ಅರಳಿತು ಮನದ ತೋಟದಲ್ಲಿ
ಪ್ರೀತಿಯ ಮೊಗ್ಗು ಮೆಲ್ಲನೇ

ಕಾಯಲಾರದೇ ಹೋದೆ ನೀನು ಅದು ಅರಳುವ ವರೆಗೆ
ಬಿಟ್ಟು ಹೋದೆ ಅರಳಿ ಪರಿಮಳ ಬೀರುವ ಹೊತ್ತಿಗೆ

ನಿನ್ನಿಂದ ಅರಳಿದ ಹೂವಿದು
ಬೇರೆ ಯಾರನ್ನು ಒಪ್ಪದು
ಈ ಹೂವು ನೀನಗೇ ಸೇರಿದ್ದು
ನೀನಗಾಗಿಯೇ ಕಾದಿರುವುದು
ಬಾಡದೇ ನಿಂತಿಹುದು
ಆದರಸುವುದು-ಬಿಡುವುದು ನೀನಗೆ ಬಿಟ್ಟಿದ್ದು!!
ನೀ ಸದಾ ಜೊತೆ ಇರುವುದಿಲ್ಲ ಎಂದು
ನಾ ಬೇಸರಗೊಂಡಾಗ ಹೇಳಿದ್ದೆ ನೀನು

"ಈ ತಂಗಾಳಿಯೇ ನನ್ನ ಪ್ರೀತಿ...
ಸದಾ ಸುಳಿದಾಡುವುದು ನಿನ್ನ ಸುತ್ತಲು" ಎಂದು

ಅದಕ್ಕೆ ಏನೋ...
ಈಗ ನನ್ನ ಉಸಿರು ಕಟ್ಟುತ್ತಿದೆ
ನಿನ್ನ ಪ್ರೀತಿ ಕರಗಿ ಹೋಯಿತಲ್ಲ!!
ಬಚ್ಚಿಟ್ಟೆ ನನ್ನ ಪ್ರೀತಿಯನ್ನು
ಲೋಕದ ಕಣ್ಣಿಂದ
ಮನಸಿನ ಆಳದಲ್ಲಿ

ನಾ ತಿಳಿದೇ ನಿನಗಿದು
ಗೊತ್ತಿರಬಹುದು
ಏಕೆಂದರೆ ನೀ ಇರುವೆ ಮನಸಲ್ಲಿ

ನೀ ಅರಿಯದೇ ಹೋದೆ ನನ್ನ ಮನಸನ್ನು
ದೂರವಾದೆ ತೊರೆದು ನನ್ನನ್ನು

ಒಂದು ಸರಿ ಇಣುಕಿ ನೋಡಬೇಕಿತ್ತು
ನೀನು ನನ್ನ ಮನಸಲ್ಲಿ
ಕಾಣುತ್ತಿತ್ತು ನಿನಗೆ ನನ್ನ ಪ್ರೀತಿಯ ಬಳ್ಳಿ!!
ಸಿಹಿಯೋ ಕಹಿಯೋ
ಕೊಟ್ಟಿರುವನು ನೆನಪುಗಳ
ಪುನಹ ಬರುವಾನೋ ಇಲ್ಲವೋ
ಜೊತೆಗಿರುವುದು ಆ ನೆನಪುಗಳು ಸದಾ...

ಆಗ ಅವನಿದ್ದ ಜೊತೆಗೆ
ಈಗ ಅವನ ನೆನಪುಗಳು ಮಾತ್ರ ಇದೆ
ನೆನಪುಗಳಿಂದ ಹೇಗೋ, ಒಂಟಿಯಂತೂ ಅಲ್ಲ ನಾನು
ಆದರೂ ಒಂಥರ ಚಂದ್ರನಿಲ್ಲದ ಬಾನು
ಚಂದ್ರ ಮತ್ತೆ ಕಾಣುವನೋ ಇಲ್ಲವೋ
ಎಣಿಸಲಾರದಷ್ಟು ನೆನಪುಗಳ
ಚುಕ್ಕೀಯಂತೂ ಸದಾ ಮನಸಲ್ಲಿ ಹೊಳೆಯುವುದು!!

ಈ ನೆನಪುಗಳು…
ಸಿಹಿಯಾದಲ್ಲಿ ತುಟಿ ಅಂಚಲಿ ನಗೆಯಾಗಿ ಚಿಮ್ಮೂವುದು !
ಕಹಿಯಾದಲ್ಲಿ ಕಣ್ಣಂಚಲಿ ಹನಿಯಾಗಿ ಹರಿವುದು !
ನಿಜವಾಗದ ಕನಸಾದಲ್ಲಿ ಬಾನಂಚಲಿ ತಾರೆಯಾಗಿ ಮಿಂಚುವುದು!!

ಹೂವಲ್ಲಿ ನಿನ್ನ ನಗೆಯ ನೆನಪು !
ಮೊಗಲ್ಲಿ ನಿನ್ನ ನಿನ್ನ ಕೋಪದ ನೆನಪು!

ಗಾಳಿಯಲ್ಲಿ ನಿನ್ನ ಪಿಸುಮಾತಿನ ನೆನಪು!

ಮಳೆಯಲ್ಲಿ ನಿನ್ನ ಆಸೆಯ ನೆನಪು !

ಹಗಲಲ್ಲಿನಿನ್ನ ಜೊತೆಗಿದ್ದ ನೆನಪು!

ಇರುಳಲ್ಲಿ ನಿನ್ನ ಕನಸಿನ ನೆನಪು!

ನೀರಲ್ಲಿ ನಿನ್ನ ಮನಸಿನ ನೆನಪು!

ನೆಲದಲ್ಲಿ ನಿನ್ನ ಹೆಜ್ಜೆಯ ನೆನಪು!

ಮೋಡದಲ್ಲಿ ನಿನ್ನ ಮರೆವಿನ ನೆನಪು!

ಬೊಂಬೆಯಲ್ಲಿ ನಿನ್ನ ಪ್ರೀತಿಯ ನೆನಪು!

ಕನ್ನಡಿಯಲ್ಲಿ ನಿನ್ನ ನೋಟದ ನೆನಪು!

ಬಳೆಗಳಲ್ಲಿ ನಿನ್ನ ಆಟದ ನೆನಪು!

ಕುಂಕುಮದಲ್ಲಿ ನಿನ್ನ ಹಸಿರಿನ ನೆನಪು!

ಬಣ್ಣಗಳಲ್ಲಿ ನಿನ್ನ ಉತ್ತರದ ನೆನಪು!

ಬಿಳಿಹಾಳೆಯಲ್ಲಿ ನಿನ್ನ ಕವನಗಳ ನೆನಪು!

ಚಿತ್ರಗಳಲ್ಲಿ ನಿನ್ನ ಬರವಸೆಯ ನೆನಪು!

ಅಕ್ಷರದಲ್ಲಿ ನಿನ್ನ ಬರವಣಿಗೆಯ ನೆನಪು !


ಲೆಕ್ಕದಲ್ಲಿ ನಿನ್ನ ಜಾಣ್ಮೆಯ ನೆನಪು !


ಕಾಯುವಾಗ ನಿನ್ನ ತಾಳ್ಮೆಯ ನೆನಪು!

ಕೈಗಳಲ್ಲಿ ನಿನ್ನ ಆಣೆಯ ನೆನಪು!

ಕಣ್ಣಲ್ಲಿ ನಿನ್ನ ಬಿಂಬದ ನೆನಪು!

ಕಣ್ಣೀರಲ್ಲಿ ನೀ ಬಿಟ್ಟುಹೋದ ನೆನಪು!

ನನ್ನ ಮನದ ತುಂಬಾ ಬರಿ ನಿನ್ನದೇ ನೆನಪು!

ನನ್ನ ಪ್ರೀತಿಗೆ ನಿನ್ನ ಕಾಣಿಕೆ ಈ ನೆನಪು!

ನನ್ನ ಕಣ್ಣೀರನ್ನು ನೋಡು
ಕೇವಲ ನಿನ್ನ ನೆನಪುಗಳ ಹಾಡು
ಒಮ್ಮೆ ಆಗಿತ್ತಿದು ನಿನ್ನ ಕನಸುಗಳ ಗೂಡು
ಈಗಾಯಿತು ಕತ್ತಲೆಯ ಕಾಡು
ಜೀವನಾವಾಗಿದೆ ಮರಳುಗಾಡು

ನಿನ್ನ ಒಂದು ಕರೆಯೇ ಮರೀಚಿಕೆ
ಆಸೆಗಳಿಗೆ ಪುನಹ ಬರುವುದು ರೆಕ್ಕೆ
ಮುರಿಯ ಬೇಡ ನನ್ನ ಮನಸನ್ನು ಜೋಕೆ!
ಕ್ಷಣ ಕ್ಷಣವೂ ಕಾಡುತಿದೆ ನಿನ್ನ ನೆನಪು ಗೆಳೆಯ
ಕಲ್ಲಾಯಿತೇಕೆ ನಿನ್ನ ಹೂವಂತ ಹೃದಯ
ಅದೊಂದು ವಿಧಿಬರಹದ ಕೆಟ್ಟ ಸಮಯ
ನೀನಂದುಕೊಂಡೆ ನನ್ನಿಂದ ನಿನಗಾಯಿತು ಅನ್ಯಾಯ
ಆದರೇನು ಮಾಡಲಿ, ನಾನು ಕೂಡ ಆಗ ಅಸಹಾಯ

ನನ್ನ ಮಾನಸಿಗೂ ಆಯಿತು ಮಾಸದ ಗಾಯ
ದಯವಿಟ್ಟು ಹೇಳಬೇಡ ವಿದಾಯ
ಇಷ್ಟು ಬೇಡಿದರು ನನ್ನನ್ನು ಕ್ಷಮಿಸೆಯ?
ಕಾಡಿರುವೆ ಬಾ... ಸೇರು ನನ್ನನ್ನು ಇನಿಯ!!

ವರುಷಗಳು ಕಳೆದರು ಮಾಯವಾಗಲಿಲ್ಲ.

ಅತ್ತು-ಕರೆದರು ನೀ ತಿರುಗಿ ಬರಲಿಲ್ಲ

ಹಾಗಂತ ಮನಸು ಮಾತ್ರ ನಿನ್ನ ನೆನೆಯುವುದ ಬಿಡಲಿಲ್ಲ

ಒಂದೊಂದು ಸಲ ಸಾಕೆನಿಸಿತು ಈ ಪ್ರೀತಿ!

ನಿನ್ನನ್ನು ಮರೆಯಲಾಗುತ್ತಿಲ್ಲವೋ ಪ್ರೀತಿ!

ಒಲಿಯದು ಮನ ನಿನ್ನನ್ನು ಮರೆಯಲು

ಚಿಗುರಿತು ಆಸೆಯ ಹೂ ನಿನ್ನನ್ನು ನೆನೆಯಲು

ಯಾಕೋ ಏನೋ, ನಿನ್ನ ಕಾಣಲು ತವಕ

ನೋಡು ಬಾ ಅದಕ್ಕೆ ಕಾಯುತ್ತಾ ಕೂತಿರುವೆ ಇಲ್ಲಿಯತನಕ

ಸರಿಯಲಿಲ್ಲ ನಿನ್ನ ನೆನಪು ಹಿಂದಕ್ಕೆ
ನೀನಿದ್ದು ನಡೆದರೆ ಸಾಕು ಈ ಜೀವನ ಮುಂದಕ್ಕೆ

ಸಾಗದು ನೋಡು ಈ ಬಾಳು ನೀನಿಲ್ಲದಿರೆ!

ನಾ ಹೇಗೆ ನೆಮ್ಮದಿಯಿಂದಿರಲಿ ನೀ ದೂರವಿದ್ದರೆ!!

ಮುಚ್ಚಿಟ್ಟ ನಿನ್ನ ಮನಸಿನ ಪುಸ್ತಕದಲ್ಲಿದ್ದ
ಬಚ್ಚಿಟ್ಟ ಅಕ್ಷರಗಳನ್ನು ನಾ ಓದಿದೆ...
ನಿನ್ನನ್ನು ನಾ ಪ್ರೀತಿಸಿದೆ!

ತೆರೆದಿದ್ದ ನನ್ನ ಮನಸಿನ ಪುಸ್ತಕದಲ್ಲಿದ್ದ
ತಪ್ಪಿದ್ದ ಮುನ್ನುಡಿಯನ್ನು ಮಾತ್ರ ನೀ ಓದಿದೆ,,
ನನ್ನನ್ನು ನೀ ತೊರೆದು ಹೋದೆ!!
ನನ್ನ ಕಣ್ಣಲೆಂದೂ ಕಾಡಿಗೆ ನಿಲ್ಲದು!
ಆಗ ಅವನ್ನನ್ನು ಕಂಡು
ನಾಚಿ ನೀರಾಯಿತು!
ಈಗ ಅವನಿಲ್ಲವೆಂದು
ಕರಗಿ ಕಣ್ಣೀರಾಯಿತು!

ನೀ ಕೊಟ್ಟ ಬಳೆಗಳು ಬೇಡ,

ನೀ ಹಾಕಿದ ಉಂಗುರ ಬೇಡ,

ನೀ ಕೊಟ್ಟ ಕಾಣಿಕೆ ಬೇಡ,

ನೀ ತೋರಿದ ಪ್ರೀತಿ ಬೇಡ,

ನಿನ್ನ ನೆನಪುಗಳು ಬೇಡ,

ಕೊಟ್ಟು ಬಿಡು ನನ್ನ ಮುಗ್ದ ಮನಸನ್ನು

ನನಗೆಹಿಂದಿರುಗಿಸು ಆ ದಿನಗಳನ್ನು ನನಗೆ

ಜೊತೆಗೆ ಕಳೆದ ಆ ಮಧುರ ಗಳೆಗೆ

ನಿನ್ನಿಂದ ದೂರ ಹೋಗಿಬಿಡುವೇ...

ಇಂದೇಕೋ ಓದಲು ಮನಸಾಯಿತು
ಹಳೆಯದೊಂದು ಪುಸ್ತಕ ಸಿಕ್ಕಿತು

ಪ್ರತಿ ಪುಟದಲ್ಲೂ ಒಂದೇ ಸಾಲು ಬರೆದಿತ್ತು
"ನಿನ್ನೆ ಪ್ರೀತಿಸುವೆ" ಎಂದಿತ್ತು
ಅದು ಅವನ ಬರವಣಿಗೆಯಾಗಿತ್ತು
ನಂತರ ನನಗೆ ತಿಳಿಯಿತು,

ಅದು ಪುಸ್ತಕವಲ್ಲ ನನ್ನ ಮನಸು!
ಇದು ನಿಜವಲ್ಲ ಕೇವಲ ಕನಸು!
ಮತ್ತೆಂದು ಮಾಡುವುದಿಲ್ಲ ಪ್ರೀತಿಸುವ ತಪ್ಪನು,
ಆದರೆ ಇದೊಂದು ಸಾರಿ ನೀನೂ ಪ್ರೀತಿಸು ನನ್ನನ್ನು!
ಮೊದಲು ಒಬ್ಬಳೇ ಇದ್ದಾಗ ಒಂಟಿತನ ಕಾಡುತ್ತಿತ್ತು,
ಈಗ ಒಬ್ಬಳೇ ಕುಳಿತಾಗ ನಿನ್ನ ನೆನಪುಗಳು ಕಾಡುತ್ತಿವೆ!
ಮೊದಲು ಜೀವನದಲ್ಲಿ ಯಾರೋ ಬರುವರು ಎಂಬ ಕನಸು,
ಈಗ ಕನಸು ಚೂರಾಗಿ ನೊಂದಿರುವ ಮನಸು!
ಮೊದಲು ಕಣ್ಣಲಿ ಹರಿಯುತ್ತಿತ್ತು ಆಸೆಯ ಹೊಳೆ,
ಈಗ ನಿರಸೆಯಾಗಿ ಹರಿಸುತಿದೆ ಕಣ್ಣೀರ ಮಳೆ!
ಮತ್ತೆ ಮತ್ತೆ ಕಾಡುವ ಆ ನೆನಪುಗಳು...
ನನಸಾಗದ ಅದೆಸ್ಟೋ ಕನಸುಗಳು...
ಆದರೂ ಕಾಯುತ್ತೆರುವ ಈ ಕಂಗಳು...
ಕನಸಿಗೂ ಮಾನಸಿಗೂ ನಡೆಯಿತು ಕದನ
ನನಗೆ ಹೆಳೆದವು ಆರಿಸಿಕೊಳ್ಳಲು ಒಬ್ಬರನ್ನ

"ಕನಸು ನನಸಾಗದು! ಅದು ಬರಿ ಸುಳ್ಳಿನ ಕವನ
ಆದರೆ ಮನಸು ಜೊತೆಗಿರುವುದು ಇಡಿ ಜೀವನ"
ಎಂದು ತಿಳಿದು, ನಾ ಮಾಡಿದೆ ತಪ್ಪನ್ನ
ತೊರೆದು ಕನಸನ್ನ,
ಆರಿಸೆಕೊಂಡೆ ಮನಸನ್ನ

ವಂಚಿಸಿತು ಮನಸು ಒಂದು ದಿನ
ಅವನೊಂದಿಗೆ ಹೊಯಿತು ಒಂಟಿಯಾಗಿಸಿ ನಾನನ್ನ

ಈಗ ಕರೆದಾಗ ಕನಸನ್ನ
ತೋರುವುದದು ಬರಿ ಹಳೆಯ ನೆನಪನ್ನ
ಪ್ರತಿಸಲವು ಹಂಗಿಸುತ್ತಾ ನನ್ನನ
ನಗುವುದದು ಕೊಟ್ಟು ನೋವನ್ನ!!
ಪ್ರತಿ ಮಳೆಯ ಹನಿಯಲ್ಲೂ ನೀನಿರುವೆ ವರುಣ
ನನ್ನ ಬಾಳಲ್ಲಿ ನೀನಾದೇ ಕಣ್ಣೀರ ಕವನ
ನಿನ್ನ ಪ್ರತಿ ಚುಚ್ಚು ಮಾತಿನ ಬಾಣ
ಕ್ಷಣ ಕ್ಷಣವೂ ಹಿಂಡುತಿದೆ ನನ್ನ ಪ್ರಾಣ
ನನ್ನ ಅರ್ಥಮಾಡಿಕೊಳ್ಳೋ ಜಾಣ
ಕೊನೆಯಾಗಲಿ ಈ ನೋವಿನ ಪಯಣ
ಬೆಳಕಾಗಿ ಬಾರೋ ಅರುಣ!
ನೀ ನನ್ನ ಜೀವ ವರುಣ!!