ಹತ್ತಾರು ಕಾರಣ ಕೊಡುವೆ ನೀನು
ನನ್ನನ್ನು ದೂರ ತಳ್ಳಲು
ಒಂದೇಯೊಂದು ಭಾವನೆ ಸಾಕು ನಂಗೆ
ನೀನು ಬೇಕೆನ್ನಲು
ನೂರು ಪ್ರಶ್ನೆ ಕೇಳುವೆ ನೀನು
ಏಕೆ ಜೊತೆ ಇರಬೇಕೆಂದು
ನೀನೆಲ್ಲ ಪ್ರಶ್ನೆಗಳಿಗೆ
ಒಂದೇಯೊಂದು ಉತ್ತರ ನಂದು
ಸಾವಿರಾರು ನೂವು ಕೊಟ್ಟೆ
ಹಣೆಬರಹ ಎಂದು ಹೆಸರು ಇಟ್ಟೆ
ಆದರೂ ನಾ ನಿನ್ನಲ್ಲೇ ಮನಸನಿಟ್ಟೆ
ನಿನ್ನೆಲ್ಲ ಮಾತಿಗೂ..
ನಿನ್ನೆಲ್ಲ ಪ್ರಶ್ನೆಗೂ..
ನನ್ನ ಉತ್ತರ ಒಂದೇಯೊಂದು........
"ಪ್ರೀತಿಸುವೆ ನಿನ್ನನು ಎಂದೆಂದು"
Subscribe to:
Post Comments (Atom)
No comments:
Post a Comment