Thursday, September 6, 2007

ಅರ್ಚನ

ಅವಳು ಬಹಳ ಸ್ವಾಭಿಮಾನಿ
ನಾ ಅವಳ ಅಭಿಮಾನಿ

ಹೂವಿಗಿಂತ ಮೃದು ಸ್ವಭಾವ
ಮನಸೊಳಗಿದೆ ನೂರು ಭಾವ

ನೂಡಲು ಅವಳು ಎಷ್ಟು ಸರಳ
ಅಂತವರು ಬಹಳ ವಿರಳ

ಇದ್ದರವಳು ನನ್ನ ಸುತ್ತು
ಜಾರುವುದು ಗೊತ್ತಾಗದಂತೆ ಹೊತ್ತು

ಮರೆಯನು ಎಂದಿಗೂ ನಾ ಅವಳನ್ನ
ಅವಳ ಆ ನಗುವನ್ನ
ಆ ನೀಳ ಜಡೆಯನ್ನ
ಅವಳೇ ಅರ್ಚನ !
ಎರೆದಳು ಸ್ನೇಹದ ಸಿಂಚನ
ಬೀರಿದಳು ಪ್ರೇಮದ ಕಂಪನ
ಅವಳಿಂದ ಸುಂದರವಾಯಿತು ಜೀವನ
ದೇವರಲ್ಲಿ ಬೇಡುವೆನು ಪ್ರತಿ ದಿನ
ಎಂದಿಗೂ ಹೀಗೆ ಇರಲಿ ನಮ್ಮ ಗೆಳೆತನ!!

No comments: