ಹೂವಲ್ಲಿ ನಿನ್ನ ನಗೆಯ ನೆನಪು !
ಮೊಗಲ್ಲಿ ನಿನ್ನ ನಿನ್ನ ಕೋಪದ ನೆನಪು!
ಗಾಳಿಯಲ್ಲಿ ನಿನ್ನ ಪಿಸುಮಾತಿನ ನೆನಪು!
ಮಳೆಯಲ್ಲಿ ನಿನ್ನ ಆಸೆಯ ನೆನಪು !
ಹಗಲಲ್ಲಿನಿನ್ನ ಜೊತೆಗಿದ್ದ ನೆನಪು!
ಇರುಳಲ್ಲಿ ನಿನ್ನ ಕನಸಿನ ನೆನಪು!
ನೀರಲ್ಲಿ ನಿನ್ನ ಮನಸಿನ ನೆನಪು!
ನೆಲದಲ್ಲಿ ನಿನ್ನ ಹೆಜ್ಜೆಯ ನೆನಪು!
ಮೋಡದಲ್ಲಿ ನಿನ್ನ ಮರೆವಿನ ನೆನಪು!
ಬೊಂಬೆಯಲ್ಲಿ ನಿನ್ನ ಪ್ರೀತಿಯ ನೆನಪು!
ಕನ್ನಡಿಯಲ್ಲಿ ನಿನ್ನ ನೋಟದ ನೆನಪು!
ಬಳೆಗಳಲ್ಲಿ ನಿನ್ನ ಆಟದ ನೆನಪು!
ಕುಂಕುಮದಲ್ಲಿ ನಿನ್ನ ಹಸಿರಿನ ನೆನಪು!
ಬಣ್ಣಗಳಲ್ಲಿ ನಿನ್ನ ಉತ್ತರದ ನೆನಪು!
ಬಿಳಿಹಾಳೆಯಲ್ಲಿ ನಿನ್ನ ಕವನಗಳ ನೆನಪು!
ಚಿತ್ರಗಳಲ್ಲಿ ನಿನ್ನ ಬರವಸೆಯ ನೆನಪು!
ಅಕ್ಷರದಲ್ಲಿ ನಿನ್ನ ಬರವಣಿಗೆಯ ನೆನಪು !
ಲೆಕ್ಕದಲ್ಲಿ ನಿನ್ನ ಜಾಣ್ಮೆಯ ನೆನಪು !
ಕಾಯುವಾಗ ನಿನ್ನ ತಾಳ್ಮೆಯ ನೆನಪು!
ಕೈಗಳಲ್ಲಿ ನಿನ್ನ ಆಣೆಯ ನೆನಪು!
ಕಣ್ಣಲ್ಲಿ ನಿನ್ನ ಬಿಂಬದ ನೆನಪು!
ಕಣ್ಣೀರಲ್ಲಿ ನೀ ಬಿಟ್ಟುಹೋದ ನೆನಪು!
ನನ್ನ ಮನದ ತುಂಬಾ ಬರಿ ನಿನ್ನದೇ ನೆನಪು!
ನನ್ನ ಪ್ರೀತಿಗೆ ನಿನ್ನ ಕಾಣಿಕೆ ಈ ನೆನಪು!
No comments:
Post a Comment