ಮನದ ತೋಟ ಬರಿದಾಗಿತ್ತು
ಗಾಳಿ ಬೀಸಿದಾಗ ಮಾತ್ರ ನಲಿಯುತ್ತಿತ್ತು
ಬಂದೆ ನೀ ವರುಣ
ಹಸಿರಾಯಿತು ನನ್ನ ಮನ
ಪ್ರತಿದಿನ ಹೊಸ ಹೊಸ ಕನಸಿನ ಬಣ್ಣ
ಅರಳಿತು ಮನದ ತೋಟದಲ್ಲಿ
ಪ್ರೀತಿಯ ಮೊಗ್ಗು ಮೆಲ್ಲನೇ
ಕಾಯಲಾರದೇ ಹೋದೆ ನೀನು ಅದು ಅರಳುವ ವರೆಗೆ
ಬಿಟ್ಟು ಹೋದೆ ಅರಳಿ ಪರಿಮಳ ಬೀರುವ ಹೊತ್ತಿಗೆ
ನಿನ್ನಿಂದ ಅರಳಿದ ಹೂವಿದು
ಬೇರೆ ಯಾರನ್ನು ಒಪ್ಪದು
ಈ ಹೂವು ನೀನಗೇ ಸೇರಿದ್ದು
ನೀನಗಾಗಿಯೇ ಕಾದಿರುವುದು
ಬಾಡದೇ ನಿಂತಿಹುದು
ಆದರಸುವುದು-ಬಿಡುವುದು ನೀನಗೆ ಬಿಟ್ಟಿದ್ದು!!
Subscribe to:
Post Comments (Atom)
No comments:
Post a Comment