Thursday, September 6, 2007

ಸಿಹಿಯೋ ಕಹಿಯೋ
ಕೊಟ್ಟಿರುವನು ನೆನಪುಗಳ
ಪುನಹ ಬರುವಾನೋ ಇಲ್ಲವೋ
ಜೊತೆಗಿರುವುದು ಆ ನೆನಪುಗಳು ಸದಾ...

ಆಗ ಅವನಿದ್ದ ಜೊತೆಗೆ
ಈಗ ಅವನ ನೆನಪುಗಳು ಮಾತ್ರ ಇದೆ
ನೆನಪುಗಳಿಂದ ಹೇಗೋ, ಒಂಟಿಯಂತೂ ಅಲ್ಲ ನಾನು
ಆದರೂ ಒಂಥರ ಚಂದ್ರನಿಲ್ಲದ ಬಾನು
ಚಂದ್ರ ಮತ್ತೆ ಕಾಣುವನೋ ಇಲ್ಲವೋ
ಎಣಿಸಲಾರದಷ್ಟು ನೆನಪುಗಳ
ಚುಕ್ಕೀಯಂತೂ ಸದಾ ಮನಸಲ್ಲಿ ಹೊಳೆಯುವುದು!!

ಈ ನೆನಪುಗಳು…
ಸಿಹಿಯಾದಲ್ಲಿ ತುಟಿ ಅಂಚಲಿ ನಗೆಯಾಗಿ ಚಿಮ್ಮೂವುದು !
ಕಹಿಯಾದಲ್ಲಿ ಕಣ್ಣಂಚಲಿ ಹನಿಯಾಗಿ ಹರಿವುದು !
ನಿಜವಾಗದ ಕನಸಾದಲ್ಲಿ ಬಾನಂಚಲಿ ತಾರೆಯಾಗಿ ಮಿಂಚುವುದು!!

No comments: