ವರುಷಗಳು ಕಳೆದರು ಮಾಯವಾಗಲಿಲ್ಲ.
ಅತ್ತು-ಕರೆದರು ನೀ ತಿರುಗಿ ಬರಲಿಲ್ಲ
ಹಾಗಂತ ಮನಸು ಮಾತ್ರ ನಿನ್ನ ನೆನೆಯುವುದ ಬಿಡಲಿಲ್ಲ
ಒಂದೊಂದು ಸಲ ಸಾಕೆನಿಸಿತು ಈ ಪ್ರೀತಿ!
ನಿನ್ನನ್ನು ಮರೆಯಲಾಗುತ್ತಿಲ್ಲವೋ ಪ್ರೀತಿ!
ಒಲಿಯದು ಮನ ನಿನ್ನನ್ನು ಮರೆಯಲು
ಚಿಗುರಿತು ಆಸೆಯ ಹೂ ನಿನ್ನನ್ನು ನೆನೆಯಲು
ಯಾಕೋ ಏನೋ, ನಿನ್ನ ಕಾಣಲು ತವಕ
ನೋಡು ಬಾ ಅದಕ್ಕೆ ಕಾಯುತ್ತಾ ಕೂತಿರುವೆ ಇಲ್ಲಿಯತನಕ
ಸರಿಯಲಿಲ್ಲ ನಿನ್ನ ನೆನಪು ಹಿಂದಕ್ಕೆ
ನೀನಿದ್ದು ನಡೆದರೆ ಸಾಕು ಈ ಜೀವನ ಮುಂದಕ್ಕೆ
ಸಾಗದು ನೋಡು ಈ ಬಾಳು ನೀನಿಲ್ಲದಿರೆ!
ನಾ ಹೇಗೆ ನೆಮ್ಮದಿಯಿಂದಿರಲಿ ನೀ ದೂರವಿದ್ದರೆ!!
No comments:
Post a Comment